ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ


ಗದಗ ನವೆಂಬರ್ 30: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) 2021-22 ನೇ ಸಾಲಿನ ಅಲ್ಪಸಂಖ್ಯಾತರ ಸಮುದಾಯದವರಿಗೆ ಅರಿವು ಯೋಜನೆ , ಕಿರು ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ , ಮೈಕ್ರೋಸಾಲ ಯೋಜನೆ ( ವೈಯಕ್ತಿಕ ಕೋವಿಡ್-19) ( 25 ರಿಂದ 50 ರವರೆಗಿನ ಮಹಿಳೆಯರಿಗೆ ಮಾತ್ರ), ಟ್ಯಾಕ್ಸಿ/ಗೂಡ್ಸ್ /ಪ್ಯಾಸೆಂಜರ್ ಅಟೋರಿಕ್ಷಾ ವಾಹನ ಖರೀದಿಗಾಗಿ ಸಹಾಯಧನ ಯೋಜನೆ, ಶ್ರಮಶಕ್ತಿ ಯೋಜನೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ 15 ಆಗಿದ್ದು , https://kmdconline.karnataka.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಜಾದ ಅಲ್ಪಸಂಖ್ಯಾತರ ಭವನ, 1 ನೇ ಮಹಡಿ ಜಿಲ್ಲಾ ನ್ಯಾಯಾಲಯ ಎದುರುಗಡೆ , ಹುಬ್ಬಳ್ಳಿ ರಸ್ತೆ , ಗದಗ ದೂರವಾಣಿ ಸಂಖ್ಯೆ 08372-2295147 ಸಂಪರ್ಕಿಸಬಹುದಾಗಿದೆ.

Discover more from Valmiki Mithra

Subscribe now to keep reading and get access to the full archive.

Continue reading