ಶೀಘ್ರ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಮನವಿ ಸಲ್ಲಿಸಲು ನೂರಾರು ರೈತರು ಸೇರಿದ್ದರು
ಮುಂಡರಗಿ ತಾಲೂಕಿನ ಸುತ್ತ ಮುತ್ತ ಗ್ರಾಮಗಳಲ್ಲಿ ಅಕಾಲಿಕ ಮಳೆಯಿಂದ ರೈತ ಕಂಗಾಲಾದ ಅನೇಕ ರೈತರು ಬಿಜೆಪಿ ಸರಕಾರದ ವಿರುದ್ದ ಘೋಷಣೆ ಕೂಗುತ್ತಾ ನಡೆದರು.
ಶೆಂಗಾ, ಮೆಕ್ಕೆಜೋಳ, ಉಳ್ಳಾಗಡ್ಡಿ, ಭತ್ತ ಕೆಳಗೆ ಬಿದ್ದು ಮತ್ತು ನಿಂತಲ್ಲಿಯೇ ತೆನೆಗಳಲ್ಲೇ ಮೊಳಕೆ ಹೊಡೆದು ಪೈರು ಹೊಲದಲ್ಲೇ ಕೊಳೆಯುತ್ತಿದೆ
ಕೃಷಿ ಅಧಿಕಾರಿಗಳು ಇನ್ನು ಸಮೀಕ್ಷೆ ಕಾರ್ಯ ನಡೆಸಿಲ್ಲ.
ಬೆಳೆದ ತೆನೆಯನ್ನು ಕಣಕ್ಕೆ ತಂದು ಹಾಕಿದರೆ ಕಣದಲ್ಲಿ ಇದ್ದರು ತನಿಖೆ ಮಾಡಿ ಪರಿಹಾರ ನೀಡಲ್ಲ ಎನ್ನುತ್ತಾರೆ
ಸರಕಾರ ಪರಿಹಾರ ನೀಡಲು ಹೊಲದಲ್ಲಿ ಬೆಳೆ ನಷ್ಟ ವಾಗಿರಬೇಕೆನ್ನುತಾರೆ.
ಆದರೆ ಅಧಿಕಾರಿಗಳು ಬೇಗನೆ ತನಿಖೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಅಗ್ರಹಿಸಿದರು.
ಹಿರಿಯ ಹೋರಾಟಗಾರ Y N ಗೌಡರ್ ಮಾತನಾಡಿ ನಾವೇನು ಉಗ್ರಗಾಮಿಗಳಲ್ಲ ನಮ್ಮ ಕೈಯಲ್ಲಿ ಮದ್ದು ಗುಂಡುಗಳು ಇಲ್ಲ ನಮಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಒಳಗೆ ಹೊಗಲು ದಾರಿ ಬಿಡಿ ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ರಾಜು ದಾವಣಗೇರಿ, ಪ್ರಧಾನಿ ಸಂಗಪ್ಪ ಕರಿ, ಚಿಕ್ಕವಡ್ಡಟ್ಟಿ ಗ್ರಾಮದ ಅನೇಕ ರೈತರು ಮುಂಡರಗಿ ತಾಲೂಕಿನ ಸುತ್ತ ಮುತ್ತ ಗ್ರಾಮದ ಅನೇಕ ರೈತರು ಇದ್ದರು.