ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶ್ರೀ ಜೈನ್ ಕಲ್ಯಾಣ ಮಂಟಪದಲ್ಲಿ ಜರುಗಿದ ಹಿಂದುಳಿದ ವರ್ಗಗಳ ಮೊರ್ಚ ರಾಯಚೂರು-ಕೊಪ್ಪಳ-ಬಳ್ಳಾರಿ ಮೂರು ಜಿಲ್ಲೆಯ ಹಿಂದುಳಿದ ವರ್ಗಗಳ ಪ್ರಮುಖರ ಸಭೆಯಲ್ಲಿ ಬಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚಿತ್ರ ನಟರು ಬಿ ಜೆ ಪಿ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನರೇಂದ್ರ ಬಾಬುರವರು ‘ಹಿಡಿಯಾದರೆ ಗೆಲ್ಲುವೆವು ಬಿಡಿ ಬಿಡಿಯಾದರೆ ಸೋಲುವೆವು’ ಎಂದು ಕಿವಿಮಾತು ಹೆಳಿದರು.
ನಂತರ ಮಾತನಾಡಿದ ಹಿಂದುಳಿದ ವರ್ಗಗದ ಮುಖಂಡರಾದ ವಿರೂಪಾಕ್ಷಪ್ಪ ಸಿಂಧನೂರು ಹಿಂದುಳಿದ ವರ್ಗಗಳ ಜನಾಂಗವನ್ನು ಕಡೆಗಣಿಸಿದ ಕಾಂಗ್ರೆಸ್ ಇಂದು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅವನತಿ ಹೊಂದಿ ದಿವಾಳಿಯಾಗಿದ್ದು ನಾವು ನೀವು ಕಂಡಿದ್ದೆವೆ ಎಂದು ಹೇಳಿದರು.
ಸನ್ಮಾನ್ಯ ಶ್ರೀ ಕೆ ಎಸ್ ಈಶ್ವರಪ್ಪವರು ಗ್ರಾಮೀಣ ಅಭಿವೃದ್ಧಿ ಸಚಿವರು ಮತ್ತು ಹಿಂದುಳಿದ ವರ್ಗಗಳ ರಾಜ್ಯ ಮುಖಂಡರು ಮಾತನಾಡಿ ರಾಜ್ಯದ 29 ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಕಚಿತ ಸಿದ್ರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಆಟ ನಡಿಯಲ್ಲಾ ಎಂದು ಗುಡುಗಿದರು. ನಮ್ಮ ಸನ್ಮಾನ್ಯ ಶ್ರೀ ನರೆಂದ್ರ ಮೋದಿಯವರ ಆಡಳಿತ ಜಗತ್ತಿಗೆ ಮಾದರಿ ಎಂದರು. ಈ ಸಭೆಯಲ್ಲಿ ಉಮೇಶ ಸಜ್ಜನ್, ಶಿವಪ್ರಕಾಶ , ತಿಮ್ಮಪ್ಪ ಬಳ್ಳಾರಿ, ಪ್ರೇಮ ಆದಿಮಠ, ವೀರಲಕ್ಷ್ಮೀ ಆದಿಮನಿ, ಹನುಮಗೌಡ ಮದರಕಲ್ ಗಲಗ ಶಕ್ತಿಕೆಂದ್ರದ ಮುಖಂಡರು, ನಿಂಗಯ್ಯ ಸುಣ್ಣದಕಲ್, ಹನುಮಂತ ಗಾಣದಾಳು ಇತರರು ಭಾಗವಹಿಸಿದ್ದರು.