ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹೋಬಳಿಯ ಪಲಕನಮರಡಿ ಗ್ರಾಮ ಪಂಚಾಯತಿಯಲ್ಲಿ ಭಾರತದ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವದಕ್ಕಾಗಿ; ಭಾರತದ ಎಲ್ಲಾ ಪ್ರಜಗಳಿಗೆ, ಸಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು: ವಿಚಾರ , ಅಭಿವ್ಯಕ್ತಿ , ನಂಬಿಕೆ, ಧರ್ಮ,ಮತ್ತು ಉಪಾಸನೆಯ, ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ; ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭಾತೃತ್ವ ಭಾವನೆಯನ್ನು ಮೂಡಿಸುವದಕ್ಕೆ ದೃಡಸಂಕಲ್ಪ ಮಾಡಿ, ನಮ್ಮ ಸಂವಿಧಾನದ ಸಭೆಯಲ್ಲಿ ೧೯೪೯ನೇಯ ಇಸವಿಯ ನವೆಂಬರ್ ತಿಂಗಳ ೨೬ನೇಯ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗಿಕರಿಸಿ,ಶಾಸನವಾಗಿ ಅರ್ಪಿಸಿಕೊಂಡಿದ್ದೆವೆ ಎಂದು ಪ್ರತಿಜ್ಞೆ ಮಾಡಲಾಯಿತು ಈ ಸಂದರ್ಭದಲ್ಲಿ ಪಂಚಾಯಿಯ ಸಿಬ್ಬಂದಿಗಳೊಂದಿಗೆ ಗ್ರಾಮದ ಮುಖಂಡರಾದ ಶ್ರೀ ನಾಗರಾಜ ಸಾಹುಕಾರ್, ರಮೇಶ ನಾಯಕ ಜಿಂಕಲ್, ದೇವಪ್ಪ ಚಾಕರಿ , ಸಿದ್ದಪ್ಪ ಗಾಜಲದಿನ್ನಿ ಇತರರು ಇದ್ದರು.