ಮಾನ್ವಿ: ಮಹರ್ಷಿ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆ

ಇಂದು ಮಾನ್ವಿ ನಗರದ ಎ.ಪಿ.ಎಮ್. ಸಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ 4ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಪರಿಶಿಷ್ಟ ಪಂಗಡಕ್ಕೆ ಕೊಡಬೇಕಾದ 7.5 ಮೀಸಲಾತಿ ಬಗ್ಗೆ ಸವಿಸ್ತಾರವಾಗಿ ಸಮುದಾಯದ ಮುಂದೆ ಇಟ್ಟರು

ಈ ಸಂದರ್ಭದಲ್ಲಿ ಶ್ರೀ ಮೌನೇಶ ನಾಯಕ ಮ್ಯಾಕಲ್ ಇವರನ್ನು ನಾಲ್ಕನೆಯ ಜಾತ್ರಾ ಮಹೋತ್ಸವಕ್ಕೆ ಜಾತ್ರಾ ಉಸ್ತುವಾರಿ ಸಮಿತಿಯ ಮಾನ್ವಿ ತಾಲೂಕು ಅಧ್ಯಕ್ಷರನ್ನಾಗಿ, ಮಹಿಳಾ ಘಟಕದಿಂದ ಲಕ್ಷ್ಮೀದೇವಿ ನಾಯಕ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು, ಇದೇ ಸಂದರ್ಭದಲ್ಲಿ ನಮ್ಮ ಎಲ್ಲಾ ವಾಲ್ಮೀಕಿ ಸಮುದಾಯದ ಪರವಾಗಿ, ವಾಲ್ಮೀಕಿ ಮೀತ್ರ ಪತ್ರಿಕೆ ವತಿಯಿಂದ ಉನ್ನತ ವ್ಯಾಸಂಗಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಶ್ರೀಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಅವರಲ್ಲಿ ವಿನಂತಿಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾನವಿ ಶಾಸಕರ ಸಹೋದರ ರಾಜಾ ರಾಮಚಂದ್ರ ನಾಯಕ ದೊರೆ, ರಾಜಾ ಶ್ಯಾಮಸುಂದರ್ ನಾಯಕ ದೊರೆ, ಹನುಮಂತಪ್ಪ ಢನಾಯಕ ವಕೀಲರು, ಈಶಪ್ಪ ನಾಯಕ, ಅಂಬಣ್ಣ ನಾಯಕ, ಬುಡ್ಡಪ್ಪ ನಾಯಕ, ಯಲ್ಲಪ್ಪ ನಾಯಕ, ಅಯ್ಯಪ್ಪ ನಾಯಕ, ಮೌನೇಶ ನಾಯಕ, ಈರಣ್ಣ ನಾಯಕ, ಶರಣಬಸವ ನಾಯಕ, ಮಂಜುನಾಥ ನಾಯಕ, ಹನುಮೇಶ ಇತರರು ಹಾಜರಿದ್ದರು

Discover more from Valmiki Mithra

Subscribe now to keep reading and get access to the full archive.

Continue reading