ಸುರಪುರ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರ

ಸುರಪುರ: ಇಂದು ತಾಲೂಕಿನ ತಿಂಥಣಿ ಗ್ರಾಮದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಶ್ರೀ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಸುರಪುರ್ ವತಿಯಿಂದ ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಹಮ್ಮಿಕೊಳ್ಳಲಾಗಿತ್ತು


ಈ ಶಿಬಿರದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ಕೋಮು ಸಾಮರಸ್ಯ ಕುರಿತಾಗಿ ವಿಶೇಷ ಉಪನ್ಯಾಸವನ್ನು ನಡೆಸಲಾಯಿತು
ವಿಶೇಷ ಉಪನ್ಯಾಸವನ್ನು ಶ್ರೀ ಗಂಗಾಧರ ನಾಯಕ ತಿಂಥಣಿ ವನವಾಸಿ ಕಲ್ಯಾಣ ಕರ್ನಾಟಕ ಪ್ರಾಂತ ಸಹ ಕಾರ್ಯದರ್ಶಿಗಳು ನಡೆಸಿಕೊಟ್ಟರು.
ವಿಶೇಷ ಉಪನ್ಯಾಸದ ಅಧ್ಯಕ್ಷತೆಯನ್ನು ಸರಿ ತಿರುಪತಿ ಕೆಂಭಾವಿ ಉಪನ್ಯಾಸಕರು ವಹಿಸಿದ್ದರು.
ಶ್ರೀ ಗಂಗಾಧರ್ ನಾಯಕರು ಉಪನ್ಯಾಸ ನೀಡುತ್ತಾ “ಇಂದಿನ ದಿನಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ಕೋಮು ಸಾಮರಸ್ಯದ ಬಗ್ಗೆ ಬಹಳ ವಿಷಯವಾಗಿ ತಿಳಿದುಕೊಳ್ಳಲು ಅತ್ಯವಶ್ಯಕವಾಗಿದೆ. ಈ ದಿನಗಳಲ್ಲಿ ಕೋಮುಸಾಮರಸ್ಯ ಕದಡುತ್ತಿದೆ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ಬರುತ್ತಿದೆ ಅದನ್ನು ಬೇರುಮಟ್ಟದಲ್ಲಿ ಚಿವುಟಿ ಹಾಕುವಂತಹ ಕಾರ್ಯ ಮಾಡಬೇಕಾಗಿದೆ. ಜಾತಿ ಧರ್ಮ ದೇಶ ಭಾಷೆ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಹೊಂದುವುದೆ ಭಾವೈಕ್ಯತೆಯಾಗಿದೆ. ಕೋಮುಸಾಮರಸ್ಯ ಮರೆಯಾಗುತ್ತಿದೆ ಜಾತಿಗಳು ಮತಗಳು ಪಂಥಗಳು ಬಿಂಬಿಸದೆ ನಾವೆಲ್ಲರೂ ಒಂದೇ ನಾವೆಲ್ಲರೂ ಭಾರತ ಮಾತೆಯ ಪುತ್ರರು . ನಾವೆಲ್ಲ ಸೇವಿಸುವ ಆಹಾರ, ನೀರು, ಗಾಳಿ, ಬೆಳಕು ಒಂದೇ ಇರುವಾಗ ಬೇದಬಾವ ಏಕೆ ಮಾಡಬೇಕು ಅದಕ್ಕಾಗಿ ನಾವೆಲ್ಲರೂ ಭಾರತ ಮಾತೆಯ ಪುತ್ರರು, ನಾವೆಲ್ಲರೂ ಸಹೋದರರು ಎಂಬ ಭಾವನೆಯನ್ನು ಒಂದುವುದೇ ಕೋಮುಸಾಮರಸ್ಯ ವಾಗಿದೆ.


12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಜಾತಿ-ಮತ-ಪಂಥಗಳನ್ನು ಮೀರಿ ನಾವೆಲ್ಲರೂ ಮಾನವರಾಗೋಣ ದಯಾ ,ಅನುಕಂಪ, ಕರುಣೆ ನಮ್ಮೆಲ್ಲರ ನೋವು ನಮ್ಮೆಲ್ಲರ ಸಂತೋಷ ಒಂದೇ ಎಂಬ ಭಾವನೆಯನ್ನು ಹೊಂದಬೇಕೆಂಬುದು ಅವರು ಹೇಳಿರುವ ಧ್ಯೇಯ ಉದ್ದೇಶವಾಗಿದೆ ಅಂಥವರ ಮಾರ್ಗದರ್ಶನವನ್ನು ಪಡೆಯುವುದು ಅತ್ಯವಶ್ಯಕವಾಗಿದೆ ಹಾಗೂ ಇಂದಿನ ದಿನಗಳಲ್ಲಿ ತಿಂಥಣಿ ಶ್ರೀ ಮೌನೇಶ್ವರರು, ಶಿರಹಟ್ಟಿ ಫಕೀರೇಶ್ವರರು, ಕೊಡೆಕಲ್ ಬಸವಣ್ಣನವರು, ಶಿಶುನಾಳ ಶರೀಫ್ ಸಾಹೇಬರು, ಶಿರಡಿಯ ಸಾಯಿಬಾಬಾ ಮೌಲ್ಯಗಳು ಅವರ ಮಾರ್ಗದರ್ಶನಗಳು ನಮಗೆ ಅತ್ಯವಶ್ಯಕವಾಗಬೇಕಾಗಿದೆ” ಹೀಗೆ ಹಲವಾರು ವಿಷಯಗಳ ಬಗ್ಗೆ ಹಾಗೂ ಕೋಮು ಸಾಮರಸ್ಯದ ಬಗ್ಗೆ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಸವಿವರವಾಗಿ ಉಪನ್ಯಾಸವನ್ನು ನೀಡಿದರು.


ಈ ಶಿಬಿರದಲ್ಲಿ 102 ವಿದ್ಯಾರ್ಥಿಗಳು ಹಾಗೂ ಎಲ್ಲಾ ಉಪನ್ಯಾಸಕರು ಮತ್ತು ಸೇವಾ ಯೋಜನೆಯ ಅಧಿಕಾರಿ ಶ್ರೀ ಡಾ ಆದಿಶೇಷ ನೀಲಗಾರ್, ಹಾಗೂ ಶ್ರೀ ಬೀರಲಿಂಗ ಉಪನ್ಯಾಸಕರು ಹಾಗೂ ಕುಮಾರಿ ಬಸವರಾಜೇಶ್ವರಿ ಉಪನ್ಯಾಸಕರು, ಕುಮಾರಿ ಮರಿಯಮ್ಮ ಕಟ್ಟಿಮನಿ ಉಪನ್ಯಾಸಕರು, ಕುಮಾರಿ ಶ್ರಿದೇವಿ ನಾಯಕ ಉಪನ್ಯಾಸಕರು, ಕುಮಾರ್ ಚಂದ್ರಶೇಖರ್ ನಾಯಕ್ ಉಪನ್ಯಾಸಕರು, ಶ್ರೀ ನಬೀಸಾಬ್ ಉಪನ್ಯಾಸಕರು, ಕುಮಾರ ಮಹೇಶ್ ಕುಮಾರ್ ಉಪನ್ಯಾಸಕರು ಹಾಗೂ ಉಪನ್ಯಾಸಕ ವರ್ಗದವರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading