ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಬೊಮ್ಮನ ಗುಡ್ಡದಲ್ಲಿ ಇಂದು ಶ್ರೀ ಗುರು ಮಹಾಶರಣರು ಪವಾಡಪುರುಷರಾದ ಶ್ರೀ ಸದಾ ನಂದೇಶ್ವರ 41ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು,
ಶ್ರೀ ಸದಾನಂದ ಅಜ್ಜನವರು ಅಧ್ಯಾತ್ಮ ಕರು ಚಿಂತಕರು ಮತ್ತು ಪವಾಡಪುರುಷ ರಾಗಿರುವುದರಿಂದ ಹಲವಾರು ಹಳ್ಳಿಗಳನ್ನು ಸುತ್ತಿ ಬೊಮ್ಮಗುಡ್ಡ ಗ್ರಾಮಕ್ಕೆ ಬಂದಾಗ ಬೊಮ್ಮನ ಗುಡ್ಡದ ಗ್ರಾಮದಲ್ಲಿ ಗ್ರಾಮದ ಹಿರಿಯರು ಮತ್ತು ಭಕ್ತರಲ್ಲಿ ಭಾವೈಕ್ಯತೆಯಿಂದ ಶರಣರ ಮಾತಿಗೆ ಬೆಲೆಕೊಟ್ಟು ನಡೆದುಕೊಂಡರು ಆದಕಾರಣ ಶ್ರೀ ಸದಾನಂದ ಅಜ್ಜ ಶಿವಯೋಗಿಗಳು ಅಲ್ಲಿನ ಜನರ ಪ್ರೀತಿ ಭಕ್ತಿ ಕಂಡು ಬೊಮ್ಮನ ಗುಡ್ಡ ಗ್ರಾಮದಲ್ಲಿ ಲಿಂಗೈಕ್ಯರಾದರು

ಶರಣರು ಆ ಗ್ರಾಮಕ್ಕೆ ಭೇಟಿ ನೀಡಿರುವುದರಿಂದ ಗ್ರಾಮದಲ್ಲಿ ಮಳೆ ಸಿರಿ ಸಂಪತ್ತು ಶಾಂತಿ ನೆಲೆಸಿತ್ತು ಆದಕಾರಣ ಗ್ರಾಮಸ್ಥರು ಮಹಾನ್ ಶಿವಯೋಗಿ ಗುರುಗಳಿಗೆ ಪ್ರತಿವರ್ಷ ಗೌರಿ ಹುಣ್ಣಿಮೆಯ ದಿನ ಜಾತ್ರಾ ಮಹೋತ್ಸವ ಮತ್ತು ಹಲವಾರು ಕಾರ್ಯಕ್ರಮಗಳನ್ನು ಮಹಾಯೋಜನೆ ಮಾಡುತ್ತಿದ್ದರು

ಪ್ರತಿವರ್ಷದಂತೆ ಈ ವರ್ಷವೂ ಗ್ರಾಮದಲ್ಲಿ 15 ದಿನಗಳ ಕಾಲ ಪುರಾಣ ಮತ್ತು ಪ್ರವಚನ ನಡೆಸಲಾಯಿತು ಪ್ರವಚನ ನಡೆಸಿಕೊಟ್ಟವರು ಶ್ರೀ ಬಸ್ಸಯ್ಯ ಶಾಸ್ತ್ರಿಗಳು ಸೋಮಶೇಖರ್ ಮಠ ಯಾಳಗಿ, ಸಂಗೀತಗಾರರು ಶರಣಕುಮಾರ್ ಯಾಳಗಿ , ತಬಲಾ ಸಾಥ್ ನೀಡಿದವರು ಪ್ರವೀಣ್ ಕುಮಾರ್ ಪತ್ತಾರ್ ಹುಣಸಗಿ, ಮತ್ತು ಇತರರು ಕಾರ್ಯಕ್ರಮ ನಡೆಸಿಕೊಟ್ಟರು ಹುಣ್ಣಿಮೆ ದಿನವಾದ್ದರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಗ್ರಾಮಸ್ಥರು ಸೇರಿ 101 ಕುಂಬ 101 ಕಳಶದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು ಸಾಯಂಕಾಲ ಭಜನಾ ಮಂಡಳಿ ವತಿಯಿಂದ ಬೆಳಗಿನ ಜಾವದವರೆಗೆ ಭಜನಾ ಕಾರ್ಯಕ್ರಮವನ್ನು ಜರುಗಿಸಲಾಯಿತು ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಗ್ರಾಮದ ಜನರು ಉಪಸ್ಥಿತರಿದ್ದರು
