ಯಾದಗಿರಿ: ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಯಾದಗಿರಿ ಗ್ರಾಮೀಣ ಮಂಡಲ ಕಾರ್ಯಕಾರಣಿಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯನ್ನು ಯಾದಗಿರಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವೆಂಕಟರೆಡ್ಡಿ ಮುದ್ನಾಳರವರು ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಡಾ. ವೀರಬಸವಂತ ರೆಡ್ಡಿ ಮುದ್ನಾಳ, ಶ್ರೀ ಅರುಣ್ ಜೀ ಬಿನ್ನಾಡೆ ವಿಭಾಗ ಸಂಘಟನಾ ಕಾರ್ಯದರ್ಶಿ, ಮಂಡಲದ ಅಧ್ಯಕ್ಷರಾದ ರಾಜಶೇಖರ್ ಕಾಡಂನೋರ್, ಸಿದ್ದನಗೌಡ ಕಾಡಂನೋರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೇತುಮಕೂರ್, ದೇವರಾಜ ನಾಯಕ ಉಳ್ಳೇಸೂಗೂರ್,ನಗರ ಮಂಡಲ ಅಧ್ಯಕ್ಷರಾದ ಸುರೇಶ್ ಅಂಬಿಗೇರ, ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ ಖಾನಾಪುರ, ಶಿವುಕುಮಾರ ಕೊಂಕಲ್,ರಾಜು ದೊರೆ ಸಾವೂರ ಸೇರಿದಂತೆ ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಘಟನಾಯಕರು ಉಪಸ್ಥಿತರಿದ್ದರು.