ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯರನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಂದ್ಯಾಳ ಪಿಯು ಗ್ರಾಮದ ಶಾಲೆಯ ಸ್ಥಿತಿ ಇದು
ಇಲ್ಲಿ ಒಟ್ಟು 350 ವಿದ್ಯಾರ್ಥಿಗಳು ಇದ್ದು . 9 ಶಿಕ್ಷಕರು ಒಳಗೊಂಡಿದೆ ಎಂದು N c ಬಿರಾದರ್ ಶಾಲೆಯ ಮುಖ್ಯ ಗುರುಗಳು ತಿಳಿಸಿದ್ದಾರೆ ಅಷ್ಟೆ ಅಲ್ಲದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ PDO ರವಿ ಗುಂಡಳ್ಳಿ ಅವರ ಆದೇಶದ ಮೇರೆಗೆ ಅಪಾಯದ ಅಂಚಿನಲ್ಲಿರುವ 3 ಕೊಣೇಗಳನ್ನು ನೆಲಸಮ ಮಾಡಿದ್ದೆವೆ ಅಷ್ಟೇ ಅಲ್ಲದೆ ಇನ್ನೂ ಎರಡು ಕೊಣೆಗಳು ಅಪಾಯದ ಅಂಚಿನಲ್ಲಿವೆ ಎಂದು ಹೇಳಿದ್ದೆನೆ ಎಂದರು ಇದೆ ಸಂದರ್ಭದಲ್ಲಿ ಬಸವರಾಜ್ ಬಾಡಗಂಡಿ ಮಾಜಿ ಸೈನಿಕ ಮಾತನಾಡಿ ಇಲ್ಲಿಯ ಮೂಲ ಸೌಲಭ್ಯಗಳಾದ ಶೌಚಾಲಯ ವ್ಯವಸ್ಥೆ ಇಲ್ಲಾ ಹಾಗೂ 340 ವಿದ್ಯಾರ್ಥಿಗಳಿಗೆ ಒಂದೆ ನಿರಿನ ಟ್ಯಾಂಕ್ ಇದ್ದು ನಿತ್ಯನೀರಿಗಾಗಿ ಪರದಾಡುವಂತಾಗಿದೆ, ಶಾಲೆಗೆ ಕಂಪೌಂಡ್ ವ್ಯವಸ್ಥೆ ಇಲ್ಲಾ.ಕೆಡವಿದ ಕಟ್ಟಡ ಜಾಗದಲ್ಲಿ ಹೊಸ ಕೊಣೇಗಳನ್ನು ಆದಷ್ಟು ಬೇಗನೇ ನಿರ್ಮಾಣ ಮಾಡಬೇಕು ಈ ಸದ್ಯದ ಪರಿಸ್ಥಿತಿ ನೊಡಿದರೆ ಮಕ್ಕಳು ಚಳಿ, ಬಿಸಿಲು, ಮಳೆ ಎನ್ನದೆ ಬಯಲಿನಲ್ಲಿ ಶಿಕ್ಷಣ ಪಡೆಯುವಂತಾಗಿದೆ ಎಂದರು
ಇಲ್ಲಿನ ವಿದ್ಯಾರ್ಥಿ ಮಾತನಾಡಿ ನಮ್ಮ ಶಾಲೆಯಲ್ಲಿ ಟಾಕಿ ಒಂದೆ ಇದ್ದು ಶೌಚಾಲಯ ವಿಲ್ಲಾ ಎಂದರು ಇದೆ ಸಂದರ್ಭದಲ್ಲಿ ಗ್ರಾಮದ ಗ್ರಾಮಸ್ಥರು ಈ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಅವರ ಮನೆಗೆ ಎರಡು ಬಾರಿ ಹೊಗಿ ಮನವಿ ಮಾಡಿಕೊಂಡರು ಪ್ರಯೊಜನ ವಾಗಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮನವಿ ಮಾಡಿದ್ದು ಆಗಿದೆ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದರತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಂದ್ಯಾಳ ಪಿಯು ಗ್ರಾಮದ ಸರ್ಕಾರಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವದು ಎಂದು ಕೂಡಾ ತಿಳಿಸಿದ್ದಾರೆ ಇದೆ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಾಪೂರಯ ಔರಸಂಗ
ಶ್ರೀಶೈಲ ಹಡಪದ
ಸಂಗು ಗದ್ಯಾಳ
ದಿಗೂ ಔರಸಂಗ
ಬಸವರಾಜ ಪಡಶೆಟ್ಟಿ
ಮಲ್ಲು ಮನಗೂಳಿ
ಲಕ್ಷ್ಮೀಕಾಂತ ಕುಮಶಿ
ಬಸವರಾಜ ಸು ಬಾಡಗಂಡಿ
ಮುತ್ತು ಸಾರವಾಡ
ಶ್ರೀಶೈಲ ಗುಂಡಳ್ಳಿ
ಅಪ್ಪು ಹಾದಿಮನಿ ಹಾಗೂ ಊರಿನ ಹಿರಿಯರು ಯುವಕರು ಹಾಜರಿದ್ದರು. ಸಂಬಂಧಪಟ್ಟ ಗ್ರಾಮದ ಜನರು ಬೇಸತ್ತು ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಕೂಡಲೇ ಇದರತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಂದ್ಯಾಳ ಪಿಯು ಗ್ರಾಮದ ಸರ್ಕಾರಿ ಶಾಲೆಗೆ ಬಿಗ್ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು
ಎಚ್ಚರಿಸಿದ್ದಾರೆ ಇನ್ನಾದರೂ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿಗಳ ಕಲಿಕೆಗೆ ದಾರಿದೀಪವಾಗಬೇಕು ಎಂಬುದೇ ನಮ್ಮ ಆಶಯವಾಗಿದೆ