ದೇವದುರ್ಗ : ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನಲ್ಲಿ ದೇವದುರ್ಗದ ಬಸ್ ನಿಲ್ದಾಣದಿಂದ ಸುಮಾರು ೩ ಕಿ ಮಿ ದೂರದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಸತಿಯಲ್ಲಿ ವಾಸವಿರುವ ಶಾಲೆ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಹೊಗಲು ಪ್ರತಿ ದಿನ ಪರದಾಡುವ ಪರಿಸ್ಥಿತಿ ಬಂದಿರುತ್ತದೆ . ಅದಕ್ಕಾಗಿ ಈ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ಪರಿಶಿಷ್ಟ ವರ್ಗಗಳ ಕಲ್ಯಾಣ ತಾಲೂಕ ಅಧಿಕಾರಿಗಳಿಗೆ ವಿದ್ಯಾರ್ಥಿನಿಯರು ಇಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಶಂಕರಗೌಡ ಮಾಲಿ ಪಾಟೀಲ್ ಹೊರಟ್ಟಿ ಜಾಲಹಳ್ಳಿ ಹಾಗೂ ವೆಂಕೊಬಗೌಡ ಪೊಲಿಸ್ ಪಾಟೀಲ್ ಬೊಮ್ಮನಹಳ್ಳಿ ಮತ್ತು ಶಿವಪ್ಪ ನಾಯಕ ಕಕ್ಕಲದೊಡ್ಡಿ ಇತರರು ಇದ್ದರು.