ತಾಲೂಕಿನ ತಿಂಥಣಿ ಗ್ರಾಮದ ಶ್ರೀ ಮೌನೇಶ್ವರ ಜಾತ್ರೆಗೆ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುವರು ಹಾಗೂ ತಿಂಥಣಿ ಗ್ರಾಮವು ಗ್ರಾಮ ಪಂಚಾಯತಿ ಕೇಂದ್ರ ಸ್ಥಾನವಾಗಿದ್ದು ಅಲ್ಲದೆ ೮ ರಿಂದ ೧೦ ಗ್ರಾಮಗಳಿಗೆ ಕೇಂದ್ರಸ್ಥಾನವಾಗಿದೆ, ಹಾಗೂ ಪ್ರತಿಷ್ಠಿತ ಜೈವಿಕ ಇಂಧನ ಕೇಂದ್ರ ತಿಂಥಣಿ ಯಲ್ಲಿದೆ ಈ ಎಲ್ಲಾ ಸವಲತ್ತುಗಳನ್ನು ಹೊಂದಿರುವ ಈ ಗ್ರಾಮಕ್ಕೆ ರಾಷ್ಟ್ರೀಕೃತ ಬ್ಯಾಂಕಿನ ಅವಶ್ಯಕತೆ ಇರುತ್ತದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೂ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಒತ್ತಾಯ ಮಾಡಲಾಯಿತು ಹಾಗೂ ಮನವಿ ಪತ್ರವನ್ನು ಕೊಡಲಾಯಿತು.
ತಾಲೂಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಶ್ರೀ ಗಂಗಾಧರ ನಾಯಕ ತಿಂಥಣಿ ಹಾಗೂ ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಶ್ರೀ ಮಲ್ಲಿಕಾರ್ಜುನ ಸಾಹುಕಾರ್, ಇಸ್ಲಾಂ ಜಮಾತಿಯ ಮುಖಂಡರಾದ ಶ್ರೀ ಫಕ್ರುದ್ದೀನ್ ಹವಾಲ್ದಾರ್ ಹಾಗೂ ಶ್ರೀ ಖಾಜಾಸಾಬ್ ಗುಂತುಗುಳಿ ಇನ್ನು ಹಲವಾರು ಮುಖಂಡರು ಇದ್ದರು.