ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿದ ಕೆ. ಎನ್ ರಾಜಣ್ಣ ಚಾಲನೆ
ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆದಿಕವಿ ಮಹರ್ಷಿ ಶ್ರೀ ಶ್ರೀ ಶ್ರೀ ವಾಲ್ಮೀಕಿ ಮಹರ್ಷಿಗಳ ಪುತ್ಥಳಿಯ ಅನಾವರಣ ಕಾರ್ಯಕ್ರಮವನ್ನು ಶಿಡ್ಲಕೋಣ ಸಂಸ್ಥಾನದ ಪರಮಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಸಂಜಯಕುಮಾರ ಶ್ರೀಗಳು ಹಾಗೂ ಮಾನ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಧುಗಿರಿ ಜನಪ್ರಿಯ ಮಾಜಿ ಶಾಸಕರು ಆದ ಶ್ರೀ ಕೆ.ಎನ್.ರಾಜಣ್ಣನವರು ಉದ್ಘಾಟಿಸಿದರು.
ವಾಲ್ಮೀಕಿ ಜಯಂತಿ ಕುರಿತು ವಿಶೇಷ ಅಹ್ವಾನಿತರಿಂದ ಭಾಷಣ ಮಾಡಿದರು ಹಾಗೆಯೇ ಅತಿ ಹೆಚ್ಚು ಅಂಕಗಳಿಸಿ ಮಕ್ಕಳಿಗೆ ಪ್ರತಿಭ ಪುರಸ್ಕಾರ ಕಾರ್ಯಕ್ರಮ ಮಾಡಲಾಯಿತು. ವಿದ್ಯಾರ್ಥಿಗಳು ಈಗೆಯೇ ವಿಧ್ಯಾಭ್ಯಾಸ ಮುಂದುವರೆಸಿ ಒಳ್ಳೆ ಭವಿಷ್ಯ ರೂಪಿಸಿಕೊಳ್ಳಿ ಎಂದು ಆರೈಸಿದರು.
ಈ ಸಂಧರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷರು ಸದಸ್ಯರು ಆದ ಶ್ರೀಮತಿ ಶಾಂತಲರಾಜಣ್ಣನವರು ಪುರಸಭಾ ಅಧ್ಯಕ್ಷ ತಿಮ್ಮರಾಯಪ್ಪ ,ಜಿ.ಪಂ ಮಾಜಿ ಸದಸ್ಯ ಜಿ.ಜೆ.ರಾಜಣ್ಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್ ಮಲ್ಲಿಕಾರ್ಜುನಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು , ಕಾಂಗ್ರೆಸ್ ಮುಖಂಡ ಎಸ್ ಎನ್ ರಾಜಣ್ಣ, ರಂಗಪ್ಪ, ಹೊಸಹಳ್ಳಿ ಗ್ರಾಮದ ಗ್ರಾ. ಪಂ ಸದಸ್ಯರು ಆದ ಸತೀಶ್ ಎಸ್ , ಕಾಂಗ್ರೆಸ್ ಮುಖಂಡ ರಘುಪತಿ , ಬಂಗಾರಿ ಹಾಗು ಗ್ರಾಮದ ಪ್ರಮುಖ ಹಿರಿಯ ಮುಖಂಡರು ಅಕ್ಕ ಪಕ್ಕದ ಗ್ರಾಮಸ್ಥರು ಕೆ.ಎನ್.ಆರ್ ಅಭಿಮಾನಿಗಳು ಹಾಜರಿದ್ದರು.
ವರದಿ: ಹರೀಶ್.ಬಿ