
ಸುರಪುರ: ತಾಲ್ಲೂಕಿನ ಶಾಖಾಪುರ (ಎಸ್. ಹೆಚ್) ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಗ್ರಾಮ ಘಟಕದ ಅಧ್ಯಕ್ಷರಾದ ಶ್ರೀ ರಾಮನಗೌಡ ಮಾಲಿ ಪಾಟೀಲ್ ರವರು ಕರ್ನಾಟಕ ಮಾತೆ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮೌನೇಶ್ ದಳಪತಿಯವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ನಾಗರಾಜ ಪೋ, ಪಾಟೀಲ್, ಮರೆಪ್ಪ ದೋರಿ, ಹಣಮಗೌಡ ಪೋ, ಪಾಟೀಲ್ ಸೇರಿದಂತೆ ಊರಿನ ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ :ಸಿಂಧೂರ ಪಾಟೀಲ್ ಸುರಪುರ ತಾಲ್ಲೂಕು.