ಸುರಪುರ ತಾಲೂಕಿನ ಬಂಡೋಳಿ ಗ್ರಾಮದ ವಾಲ್ಮೀಕಿ ಸಮುದಾಯದ ಶ್ರೀ ಶರಣಗೌಡ ಪೋಲಿಸ್ ಪಾಟೀಲ್ ರವರ ಸುಪುತ್ರಿ ಕುಮಾರಿ ರೂಪಾ ಎಸ್ ಪಾಟೀಲ್, ವೈದ್ಯಕೀಯ ಶಿಕ್ಷಣದ ನೀಟ್ ಪರೀಕ್ಷೆಯಲ್ಲಿ ನ್ಯಾಷನಲ್ ಮಟ್ಟದ 39390 ನೆ ರಾಂಕ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.
ಉನ್ನತ ಶಿಕ್ಷಣಕ್ಕೆ ನೀಟ್ ಪಾಸಾಗಿರುವ ಕುಮಾರಿ ರೂಪಾ ಎಸ್ ಪಾಟೀಲ್ ಅವರಿಗೆ ತಿಂಥಣಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಿಲಯದಲ್ಲಿ, ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕಾಧ್ಯಕ್ಷರಾದ ಶ್ರೀ ಗಂಗಾಧರ ನಾಯಕ ತಿಂಥಣಿ ಹಾಗೂ ದಂಪತಿಗಳು ಹಾಗೂ ಗ್ರಾಮದ ಪ್ರಮುಖರಾದ ಶ್ರೀ ರಂಗಣ್ಣ ಬುಂಕಲದೊಡ್ಡಿ, ಶ್ರೀ ರಾಮಣ್ಣ ಮೋರಟಗಿ, ಶ್ರೀ ಯಂಕಪ್ಪ ಕವಲ್ದಾರ, ಶ್ರೀ ಶಿವಶರಣ ಅಂಬಿಗರ ಇನ್ನು ಹಲವಾರು ಮುಖಂಡರು ಕುಮಾರಿ ರೂಪಾ ಎಸ್ ಪಾಟೀಲ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು…