ಸುರಪುರ:ತಾಲ್ಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಕ. ರ. ವೇ. ತಾಲ್ಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ನಾಯಕ ಬೈರಿಮಡ್ಡಿ ಅವರು ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ, ತಾಲ್ಲೂಕು ಪದಾಧಿಕಾರಿಗಳಾದ ಶ್ರೀ ವೆಂಕಟೇಶ್ ಪ್ಯಾಪ್ಲಿ, ಹಣಮಗೌಡ ಶಾಖಾಪುರ, ಶ್ರೀನಿವಾಸ ಬೈರಿಮಡ್ಡಿ, ಹಣಮಂತ್ರಾಯ್ಯ ಚಿಕಮೇಟಿ ಹಾಲಿಗೇರಾ, ರಂಗನಾಥ ಬಿರಾದಾರ, ಸೋಮಯ್ಯ ಹೊಸಮನಿ ಹಾಲಿಗೇರಾ, ಮರೀಲಿಂಗಪ್ಪ ಅಡ್ಡೋಡಗಿ, ಯುವ ಘಟಕದ ನಾಗರಾಜ್ ಡೊಣ್ಣಿಗೇರಿ, ಸಾಯಬಣ್ಣ ಬೆಂಕಿ ದೋರಿ, ಕಾರ್ಮಿಕ ಘಟಕದ ಅಯ್ಯಪ್ಪ ವಗ್ಗಾಲಿ,ನಗರ ಘಟಕದ ಅನೀಲ್ ಬಿರಾದಾರ್, ಸೇರಿದಂತೆ ವಿವಿಧ ಗ್ರಾಮ ಶಾಖೆಯ ಪದಾಧಿಕಾರಿಗಳಾದ ಭಲಭೀಮ ಬೊಮ್ಮನಹಳ್ಳಿ, ದೇವಿಂದ್ರಪ್ಪ ಚಂದ್ಲಾಪುರ,ಬಸಪ್ಪ ಡ್ರೈವರ್, ಹೊನ್ನಪ್ಪ ಸವಳಪಟ್ಟಿ,ರಾಜು ಕವಡಿಮಟ್ಟಿ ಹಾಗೂ ಇತರರು ಭಾಗವಹಿಸಿದ್ದರು. ವರದಿ : ಸಿಂಧೂರ ಪಾಟೀಲ್ ಸುರಪುರ ತಾಲ್ಲೂಕು.