ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೇಕಲ್ಲ ಪಟ್ಟಣದಲ್ಲಿ ವಿಶ್ವಗುರು ಶ್ರೀ ಗುರು ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಸಲಾಯಿತು
ಸುರಪುರ ಸಂಸ್ಥಾನಕ್ಕೆ ಸಂಬಂಧಪಟ್ಟ ಕೊಡೇಕಲ್ಲ ಪಟ್ಟಣದಲ್ಲಿ ಶ್ರೀ ಗುರು ವಾಲ್ಮೀಕಿ ಪರಮ ಭಕ್ತರಾದ, ಎಂ,ಕೆ, ಸಿದ್ದಣ್ಣ ಅವರು ತನ್ನ ಸಮಾಜದ ಗುರುಗಳಿಗಾಗಿ ತನ್ನ ಸ್ವಂತ ಜಮೀನನಲ್ಲಿ ಗುಡಿಕಟ್ಟಿ 1986ರಲ್ಲಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು ವಾಲ್ಮೀಕಿ ಮೂರ್ತಿಯ ಜೊತೆಗೆ ಗರ್ಭಗುಡಿಯಲ್ಲಿ ನವಗ್ರಹ ವು ಸ್ಥಾಪನೆ ಮಾಡಿದರು ಆದರೆ ಎಂ, ಕೆ ಸಿದ್ದಣ್ಣ ನವರು ತನ್ನ ಹಾಗೂ ಹಾಗೂ ಕೊಡೇಕಲ್ಲಿನ ಜಾಗೀರದಾರರು ಮತ್ತು ಗ್ರಾಮಸ್ಥರು ಸೇರಿ ಕುಲದೇವರಾದ, ಶ್ರೀ ಗುರು ಮಹರ್ಷಿ ವಾಲ್ಮೀಕಿ ಅವರನ್ನು ವರ್ಷಕ್ಕೊಮ್ಮೆ ಜಾತ್ರಾಮಹೋತ್ಸವವನ್ನು ನಡೆಸುತ್ತಿದ್ದರು
ಅದರಂತೆ ಈ ವರ್ಷವೂ ಕೂಡ ಕೊಡೇಕಲ್ಲಿನ ಜಾಗಿರ್ದಾರ್ ರಾದ ಶ್ರೀ ಜಿತೇಂದ್ರ ನಾಯಕ್ ಮತ್ತು ಶ್ರೀ ವೆಂಕಟಪ್ಪ ನಾಯಕ್ ಜಾಗಿರ್ದಾರ್
ಶ್ರೀ ಹನುಮಂತ ನಾಯಕ್ (ಬಬ್ಲು ಗೌಡರು), ಶ್ರೀ ಬಸವರಾಜ್ ಜೀರಾಳ ಅಧ್ಯಕ್ಷರು ತಾಲೂಕ ವಾಲ್ಮೀಕಿ ನಾಯಕ ಸಂಘ ಹುಣಸಗಿ.ಮತ್ತು ಕೊಡೇಕಲ್ಲಿನ ಗ್ರಾಮಸ್ಥರು ಸೇರಿ ಗ್ರಾಮದ ಮಹಿಳೆಯರು 101 ಕುಂಭ ಹೊತ್ತು ಮೆರವಣಿಗೆ ನಡೆಸಲಾಯಿತು ಇದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಕೊಡೆಕಲ್ಲ ಪಟ್ಟಣದ ಗ್ರಾಮಸ್ಥರು ಉಪಸ್ಥಿತರಿದ್ದರು