ಯಾದಗಿರಿ: ಆರೋಗ್ಯ ಮಿತ್ರ ಸಮಾರೋಪ ಸಮಾರಂಭಇತ್ತೀಚೆಗೆ ಆರೋಗ್ಯ ಮಿತ್ರ ತರಬೇತಿ ವರ್ಗದ ಸಮಾರೋಪ ಸಮಾರಂಭವನ್ನು ಯಾದಗಿರಿ ನಗರದ ಲಕ್ಷ್ಮಿ ಗುಡಿ ಹತ್ತಿರ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು
ಈ ಸಮಾರಂಭಕ್ಕೆ ಅಧ್ಯಕ್ಷತೆಯನ್ನು ಮಾನ್ಯ ಶ್ರೀ ಎಸ್ ಬಿ ನಾಯಕ ವಕೀಲರು ಹಾಗೂ ನೋಟರಿ ಯಾದಗಿರಿ ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ವೀರಬಸವಂತ ರೆಡ್ಡಿ ಮುದ್ನಾಳ ಮಾಜಿ ಶಾಸಕರು ಹಾಗೂ ಖ್ಯಾತ ವೈದ್ಯರು .. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಕ್ತಾರರಾಗಿ ಮಾನ್ಯ ಶ್ರೀ ಶ್ರೀ ಪಾದ ಜೀ ದಕ್ಷಿಣ ಮಧ್ಯ ಕ್ಷೇತ್ರದ ಸಂಘಟನಾ ಕಾರ್ಯದರ್ಶಿಗಳು ಹೈದರಾಬಾದ್ ಉಪಸ್ಥಿತರಿದ್ದರು.
ಅತಿಥಿಗಳಾಗಿ ಮಾನ್ಯ ಶ್ರೀ ಸಿದ್ದರಾಮ ರೆಡ್ಡಿ ಮಾಲೀಕರು ಬಸವೇಶ್ವರ ಕಲ್ಯಾಣ ಮಂಟಪ ಯಾದಗಿರಿ.
ಮಾನ್ಯ ಶ್ರೀ ಲಕ್ಷ್ಮಣರಾವ್ ಹೆಂದೆ ಸಂಘದ ಹಿರಿಯ ಸ್ವಯಂಸೇವಕರು ಹಾಗೂ ನಗರದ ಸಂಘಚಾಲಕರು.
ಮಾನ್ಯ ಶ್ರೀ ಶ್ರೀನಿವಾಸ್ ಜಿ ವನವಾಸಿ ಕಲ್ಯಾಣ ಕರ್ನಾಟಕ ಪ್ರಾಂತದ ಸಂಘಟನಾ ಕಾರ್ಯದರ್ಶಿಗಳು.
ಮಾನ್ಯ ಶ್ರೀ ಗಂಗಾಧರ ನಾಯಕ್ ತಿಂಥಣಿ ಸಹ ಕಾರ್ಯದರ್ಶಿಗಳು ವನವಾಸಿ ಕಲ್ಯಾಣ ಕರ್ನಾಟಕ ಪ್ರಾಂತ.. ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರಾರ್ಥನೆ ಗೀತೆಯನ್ನು ಭಗಿನಿ ಶ್ರೀಮತಿ ಜಗದೇವಿ ಸಂಗಡಿಗರಿಂದ ಹಾಡಲಾಯಿತು.
ಸ್ವಾಗತ ಪರಿಚಯ ಶ್ರೀ ಸಿದ್ದಪ್ಪ ರಾಮಸಮುದ್ರ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಯಾದಗಿರಿ.
ಕಾರ್ಯಕ್ರಮ ನಿರೂಪಣೆ ಶ್ರೀ ಕಾಶಪ್ಪ ದೊರೆ ಅಬ್ಬೆತುಮಕೂರು ಜಿಲ್ಲಾ ಕಾರ್ಯದರ್ಶಿಗಳು ಯಾದಗಿರಿ.
ದಿಕ್ಸೂಚಿ ಭಾಷಣ ಮಾನ್ಯ ಶ್ರೀ ಶ್ರೀಪಾದ ಜೀ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಗಳು ಮಾತನಾಡಿ ವನವಾಸಿ ಕಲ್ಯಾಣ ಸಂಸ್ಥೆಯು ಇಡೀ ಭಾರತ ದೇಶಾದ್ಯಂತ ಆದಿವಾಸಿಗಳ, ಬುಡಕಟ್ಟುಜನರ,ಪರಿಶಿಷ್ಟ ಪಂಗಡ ಜನರ ಸಾಮಾಜಿಕ ಶೈಕ್ಷಣಿಕ ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಲು ವನವಾಸಿ ಕಲ್ಯಾಣ ಸಂಸ್ಥೆಯು ಶ್ರಮಿಸುತ್ತಿದೆ ಈ ಸಂಸ್ಥೆಯು ಆಯಾಮಗಳನ್ನೊಳಗೊಂಡ ಸಂಸ್ಥೆಯಾಗಿದೆ ಇದನ್ನು ಮಾನ್ಯ ಶ್ರೀ ಸ್ವರ್ಗೀಯ ಬಾಳಾಸಾಹೇಬ್ ದೇಶ್ಪಾಂಡೆ ರವರು ಜಸ್ಟ್ ಪುರದಲ್ಲಿ ಸ್ಥಾಪನೆ ಮಾಡಿದರು ಈಗ ಇಡೀ ದೇಶಾದ್ಯಂತ
ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಈ ಸಂಸ್ಥೆಯು ದಾನಿಗಳ ನೆರವಿನಿಂದ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಶಿಬಿರಾರ್ಥಿಗಳಿಂದ ಅನಿಸಿಕೆಗಳು ಭಗಿನಿ ಶ್ರುತಿ ರಾಯಚೂರು. ಭಗಿನಿ ಮಹೇಶ್ವರಿ ತಿಂಥಣಿ. ಹಾಗೂ ಶ್ರೀ ವೆಂಕಟೇಶ ಐಕೂರ್ ತಮ್ಮ ಅಭಿಪ್ರಾಯಗಳನ್ನು ಹಾಗೂ ವರ್ಗದಲ್ಲಿ ಕಲಿತ ವಿಷಯಗಳ ಬಗ್ಗೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾನ್ಯ ಶ್ರೀ ಡಾಕ್ಟರ್ ವೀರ ಬಸವಂತ ರೆಡ್ಡಿ ಮುದ್ನಾಳ್ ಮಾಜಿ ಶಾಸಕರು ಯಾದಗಿರಿ ರವರು ಮಾತನಾಡುತ್ತ ವನವಾಸಿ ಕಲ್ಯಾಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವಂತಹ ಕಾರ್ಯಕರ್ತರೆ ಧನ್ಯರು ಈ ಸಂಸ್ಥೆಯು ಜೀವನಕ್ಕೆ ಅವಶ್ಯವಿರುವ ಸರಳ ಜೀವನ ಸ್ವಾಭಿಮಾನ ಹಾಗೂ ದೇಶದ ಪರಂಪರೆಯನ್ನು ಮೈಗೂಡಿಸಿಕೊಂಡು ಹೋಗುವಂತೆ ಹೇಳಿಕೊಡುತ್ತದೆ ಕಾರಣ ಕಾರ್ಯಕರ್ತರು ಈ ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ತನು ಮನ ಧನದಿಂದ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು, ಹಾಗೂ ತಮ್ಮ ಜೀವನದ ಅನುಭವಗಳು ಹಾಗೂ ಸಮಾಜ ಸೇವೆಯ ವಿವರಣೆ ಬಗ್ಗೆ ಹಾಗೂ ವನವಾಸಿ ಕಲ್ಯಾಣ ಕಾರ್ಯಕರ್ತರನ್ನು ಕುರಿತು ಭಾಷಣ ಮಾಡಿದರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾನ್ಯ ಶ್ರೀ ಗಂಗಾಧರ ನಾಯಕ್ ತಿಂಥಣಿ ಎಲ್ಲರಿಗೂ ವಂದಿಸಿದರು.
ಕೊನೆಗೆ ಅತಿಥಿಗಳಿಗೆ , ಅಧ್ಯಕ್ಷರಿಗೆ ನೆನಪಿನ ಕಾಣಿಕೆಗಳನ್ನು ನೀಡಿದರು ನಂತರ ಶಾಂತಿ ಮಂತ್ರದೊಂದಿಗೆ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ಮುಕ್ತಾಯ ಮಾಡಲಾಯಿತು
ಈ ಕಾರ್ಯಕ್ರಮದಲ್ಲಿ ಶ್ರೀಮಾನ್ಯ ಸೋಮಶೇಖರ್ ಜಾಗಟೆ, ಶ್ರೀ ರಾಘವೇಂದ್ರ ಕುಲಕರ್ಣಿ, ಶ್ರೀ ತಿಪ್ಪಾರೆಡ್ಡಿ, ಶ್ರೀ ವೀರಾರೆಡ್ಡಿ ಉದ್ದಿಮೆದಾರರು ಯಾದಗಿರಿ, ಇನ್ನು ಹಲವಾರು ಹಿರಿಯರು ಹಾಗೂ ಸಂಘದ ಕಾರ್ಯಕರ್ತರು ಹಾಗೂ. ವನವಾಸಿ ಕಲ್ಯಾಣದ ಹಲವಾರು ಕಾರ್ಯಕರ್ತರು ಮತ್ತು 42ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.