“ಇಂದು ಮಾನ್ವಿ ನಗರದ ವಾಲ್ಮೀಕಿ ವೃತ್ತ” ದಲ್ಲಿ “ಬಾರದ ಲೋಕಕ್ಕೆ ಹೋದ ಸದಾ ನಗುವಿನ ರಾಜಕುಮಾರ, “ಕನ್ನಡ ನಾಡು ಕಂಡ ಮೇರುನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ” “ಮಾನ್ವಿ ಜನಪ್ರಿಯ ಶಾಸಕರು ಸನ್ಮಾನ್ಯ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ಅವರು” ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು…ನಂತರ ಜನಪ್ರಿಯ ಶಾಸಕರು ಮಾತನಾಡಿ ಕನ್ನಡ ನಾಡು ಕಂಡ ಅದ್ಭುತ ನಟ ಕನ್ನಡ ಚಿತ್ರರಂಗಕ್ಕೆ ಅವರ ಚಿತ್ರಗಳು ಕನ್ನಡ ನಾಡಿನ ಜನರಿಗೆ ಅದ್ಭುತ ಚಿತ್ರಗಳನ್ನು ಕೊಟ್ಟು ಹೋಗಿದ್ದಾರೆ. ಇಂತಹ ಮೇರು ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬರಿದಾಗಿದೆ..”ಇಂತಹ ಚಿಕ್ಕವಯಸ್ಸಿನಲ್ಲಿ ಅವರನ್ನು ನಾವು ಕಳೆದುಕೊಂಡಿದ್ದೇವೆ, “ಆದರೆ ಅವರ ಆದರ್ಶಗಳು ಯಾವುದೇ ಅಜರಾಮರ, “ಪ್ರಚಾರ ಇಲ್ಲದೆ ಅನೇಕ ದಾನ ಧರ್ಮಗಳ ಮಾಡುವುದರ ಮೂಲಕ ಎಲ್ಲರ ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ “ಇಂತಹ ಅದ್ಭುತ ನಟನನ್ನ ಕಳೆದುಕೊಂಡ ನಾವು ಹಾಗೂ ಅವರ ಅಭಿಮಾನಿಗಳು ಧೃತಿಗೆಡಬಾರದು “ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾನ್ವಿ ಜನಪ್ರಿಯ ಶಾಸಕರು ಹಾಗೂ ಮಾನ್ವಿ ಜೆಡಿಎಸ್ ಪುರಸಭೆ ಎಲ್ಲಾ ಸದಸ್ಯರು ಹಾಗೂ ಜೆಡಿಎಸ್ ಹಿರಿಯ ಮುಖಂಡರು ಹಾಗೂ ಯುವ ಮುಖಂಡರು ಹಾಗೂ ಪುನೀತ್ ರಾಜಕುಮಾರ್ ಅಪಾರ ಅಭಿಮಾನಿಗಳು ದೀಪ ಹಾಗೂ ಮೌನಾಚರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ವರದಿ:ದೇವರಾಜ ನಾಯಕ ಮಾನವಿ