ಮೈಸೂರು ಭಾಗದ ನಾಯಕ ಸಮಾಜದ ಬಹುದಿನಗಳ ಕನಸು ಇಂದು ನನಸಾಗಿದೆ. ನಾಯಕ ಸಮಾಜದವರು ಪ್ರಬಲವಾಗಿರುವ ಹಂಚ್ಯಾ, ರಮ್ಮನಹಳ್ಳಿ, ಕ್ಯಾತಮಾರನಹಳ್ಳಿ ವ್ಯಾಪ್ತಿಗೆ ಬರುವ ಮೈಸೂರು ನಗರದ ಸಾತಗಳ್ಳಿ ಡಿಪೋ ವೃತ್ತಕ್ಕೆ “ಆದಿಕವಿ ಮಹರ್ಷಿ ವಾಲ್ಮೀಕಿ” ಯವರ ಹೆಸರನ್ನು ನಾಮಕರಣ ಮಾಡಿ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಪರಿಹಾರ ಸಮಿತಿ ನಿಗಮ ಮಂಡಳಿಯ ಅಧ್ಯಕ್ಷರಾದ ರಾಮಚಂದ್ರಣ್ಣ ಹಾಗೂ MDCC ಬ್ಯಾಂಕಿನ ಅಧ್ಯಕ್ಷರಾದ ಹರೀಶ್ ಗೌಡ ರವರುಗಳ ಅಮೃತಹಸ್ತದಿಂದ ಉದ್ಘಾಟನೆ ಮಾಡಿಸಲಾಯಿತು.
ಈ ಒಂದು ಕಾರ್ಯಕ್ಕೆ ಪರೋಕ್ಷವಾಗಿ ಸಹಕಾರ ನೀಡಿದ “ಸರ್ವ ಜನಾಂಗ” ದ ಮುಖಂಡರುಗಳಿಗೆ, ನಗರಪಾಲಿಕೆ ಸದಸ್ಯರುಗಳಿಗೆ, ಸರ್ಕಾರಿ ನೌಕರರಿಗೆ, ಸಮಾಜ ಸೇವಕರಿಗೆ ಹಾಗೂ ಈ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ಮಾಡಿ, ಧೈರ್ಯ ತುಂಬಿ ಈ ಕಾರ್ಯಕ್ಕೆ ಸಂಪೂರ್ಣವಾಗಿ ಸಹಕಾರ ನೀಡಿದ ಸರ್ವ ಸಮುದಾಯದ ಜಾತಿ ಜನಾಂಗಗಳ ಮತ್ತು ಎಲ್ಲಾ ರಾಜಕೀಯ ಪಕ್ಷದ ಮುಖಂಡರಿಗೆ ಧನ್ಯವಾದಗಳು.