ಸುರಪುರ: ತಾಲ್ಲೂಕಿನ ಹಾಲಿಗೇರಾ ಗ್ರಾಮದಲ್ಲಿ ಕಾರಣಾತರಗಳಿಂದ ಮುಂದೂಡಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಇಂದು ಗ್ರಾಮ ಘಟಕದ ವತಿಯಿಂದ ಆಚರಿಸಲಾಯಿತು, ಹಾಗೂ ಗ್ರಾಮದ ಪ್ರಮುಖ ರಸ್ತೆಯಲ್ಲಿ ವಾಲ್ಮೀಕಿಯವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀ ಭೀಮಣ್ಣ ಹೊಸಮನಿ, ಹಣಮಂತ್ರಾಯ್ಯ ಚಿಕಮೇಟಿ, ಸೋಮಯ್ಯ ಪೂಜಾರಿ, ಚನ್ನಪ್ಪ ಪೋ ಪಾಟೀಲ್, ಮಲ್ಲಪ್ಪ ಚಿಕಮೇಟಿ, ನಿಂಗಯ್ಯಗೌಡ ಪೋ ಪಾಟೀಲ್, ದೇವಣ್ಣ ದಾಸಿ ಸೇರಿದಂತೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳಾದ ದೇವರಾಜ ನಾಯಕ ಪೋ ಪಾಟೀಲ್ ಗೌರವಧ್ಯಕ್ಷರು, ಸೋಮು ನಾಯಕ ಚಿಕಮೇಟಿ ಅಧ್ಯಕ್ಷರು, ಯಂಕಯ್ಯ ದಾಸಿ ಉಪಾಧ್ಯಕ್ಷರು, ಸಾಧು ಪೂಜಾರಿ ಸಹ ಕಾರ್ಯದರ್ಶಿ, ಭೀಮು ನಾಯಕ ಚಿಕಮೇಟಿ ಸಂಘಟನಾ ಕಾರ್ಯದರ್ಶಿ, ಮರೆಪ್ಪ ಪೂಜಾರಿ ಖಜಾಂಚಿ ಹಾಗೂ ಊರಿನ ಹಿರಿಯರು, ಇತರರು ಭಾಗವಹಿಸಿದ್ದರು. ವರದಿಗಾರರು: ಸಿಂಧೂರ ಪಾಟೀಲ್ ಸುರಪುರ ತಾಲ್ಲೂಕು.