ಉಡುಪಿ: ಕುಂದಾಪುರ ತಾಲೂಕಿನ ಶಾಲೆಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡದಿರುವ ಬಗ್ಗೆ ವಾಲ್ಮೀಕಿ ಮಿತ್ರ ಪತ್ರಿಕೆಯ ಉಡುಪಿ ಜಿಲ್ಲಾ ವ್ಯವಸ್ಥಾಪಕರಾದ ಬಾಲಕೃಷ್ಣ ನಾಯಕ್ ರವರು ವಾಲ್ಮೀಕಿ ಮಿತ್ರ ವೆಬ್ ಪತ್ರಿಕೆಯಲ್ಲಿ ವರದಿ ಮಾಡಿದ ಹಿನ್ನೆಲೆಯಲ್ಲಿ “ವಾಲ್ಮೀಕಿ ಮಿತ್ರ ಪತ್ರಿಕೆ” ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಮಾತನಾಡಿ ಈ ಬಗ್ಗೆ ಮಾಹಿತಿ ಕೇಳಿ, ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ದೇಶಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಕ್ಟೋಬರ್ 30ರೊಳಗೆ ತಾಲ್ಲೋಕಿನ ಎಲ್ಲ ಶಾಲೆಗಳಲ್ಲೂ ತಪ್ಪದೇ ವಾಲ್ಮೀಕಿ ಜಯಂತಿ ಆಚರಣೆ ಮಾಡುವಂತೆ ಆದೇಶಿಸಿದ್ದಾರೆ
ಆ ಹಿನ್ನೆಲೆಯಲ್ಲಿ ಇಂದು ಹಾಜಿ ಕೆ ಮೋಹಿದ್ದಿನ್ ಬ್ಯಾರಿ ಮೆಮೋರಿಯಲ್ ಸರ್ಕಾರಿ ಉರ್ದು ಹಿರಿಯ ಪ್ರಾರ್ಥಮಿಕ ಶಾಲೆ ಕೋಡಿ ಕುಂದಾಪುರದಲ್ಲಿ ಇಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು
ಪತ್ರಿಕೆಯ ಮನವಿಗೆ ಸ್ಪಂದಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಾಲ್ಮೀಕಿ ಮಿತ್ರ ಪತ್ರಿಕೆಯ ಪರವಾಗಿ ಧನ್ಯವಾದಗಳು