ಅಣ್ಣಿಗೇರಿ: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ವಾಲ್ಮೀಕಿ ಜಯಂತಿಯನ್ನು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಅಣ್ಣಿಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಶ್ರೀ ಷಣ್ಮುಖ ಗುರಿಕಾರ್ ರಾಜ್ಯ ರೈತಮೋರ್ಚಾ ಉಪಾಧ್ಯಕ್ಷರು ಹಾಗೂ ತಹಸಿಲ್ದಾರ್, ಪುರಸಭೆ ಮುಖ್ಯಾಧಿಕಾರಿ, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯ ಶ್ರೀಮತಿ ಕಪಿಲಾ, ವಿ ಎಸ್ ಪಾಟೀಲ್ ESI, ಶ್ರೀ ಮಾರುತಿ ಮರಡ್ಡಿ, ಶ್ರೀ ದ್ಯಾಮಣ್ಣ ಅಜ್ಜನವರು, ಶ್ರೀ ಬಸವರಾಜ್ ಯಳವತ್ತಿ, ಶ್ರೀ ಧರ್ಮರಾಜ ಹರಣಶಿಕಾರಿ, ಹಾಗೂ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದರು