ವಾಲ್ಮೀಕಿ ಜಯಂತಿ ಆಚರಣೆಯನ್ನು ಉಡುಪಿಯ ಯಾವ ಗ್ರಾಮ ಪಂಚಾಯಿತಿಗಳಲ್ಲಿ, ಶಾಲೆಗಳಲ್ಲಿ ಆಚರಿಸದೇ ಸಮುದಾಯಕ್ಕೆ ಮತ್ತು ಮಹರ್ಷಿ ವಾಲ್ಮೀಕಿಯವರಿಗೆ ಅವಮಾನಿಸಲಾಗಿದೆ ಎಂದು ಕುಂದಾಪುರ ತಾಲೂಕು ನಾಯಕ ಸಂಘಟನೆಯ ಅಧ್ಯಕ್ಷ ಬಾಲಕೃಷ್ಣ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಉಡುಪಿ ಜಿಲ್ಲಾಧಿಕಾರಿ ಹಾಗೂ ಕಾರ್ಯನಿರ್ವಾಹಣಾಧಿಕಾರಿಯವರಿಗೆ ದೂರು ಸಲ್ಲಿಸಿ, ಮಾತನಾಡಿದ ಬಾಲಕೃಷ್ಣ ನಾಯಕ
ಶ್ರೀರಾಮುಲು ಸಾಹೇಬರೇ ಪರಿಶಿಷ್ಟ ಪಂಗಡದ ಶಾಸಕರಲ್ಲಿ ಕೇಳಿಕೊಳ್ಳುವುದೇನೆಂದರೆ ವಾಲ್ಮೀಕಿ ಜಯಂತಿ ಉತ್ಸವವನ್ನು ಉಡುಪಿ ಜಿಲ್ಲಾಡಳಿತ ಹಾಗೂ ಕುಂದಾಪುರ ತಾಲೂಕು ಆಡಳಿತ ಮಾತ್ರ ಆಚರಣೆ ಮಾಡಿರುತ್ತಾರೆ ಕುಂದಾಪುರ ತಾಲೂಕು ಯಾವುದೇ ಗ್ರಾಮ ಪಂಚಾಯಿತಿಯಲಿ ಕೂಡ ವಾಲ್ಮೀಕಿ ಜಯಂತಿ ಉತ್ಸವವನ್ನು ಆಚರಣೆ ಮಾಡಿರುವುದಿಲ್ಲ ಹಾಗಾಗಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಇವರಿಗೆ ಈಗಾಗಲೇ ಕುಂದಾಪುರ ತಾಲೂಕು ನಾಯಕ ಸಂಘಟನೆಯ ಅಧ್ಯಕ್ಷರನಾಗಿ ದೂರನ್ನ ಸಲ್ಲಿಸಿರುತ್ತೇನೆ ಹಾಗಾಗಿ ತಾವು ಉಡುಪಿ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಹಾಗೂ ಶಿಕ್ಷಣ ಸಂಸ್ಥೆಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡುವುದರ ಬಗ್ಗೆ ಕಡ ಖಂಡಿತವಾಗಿ ಖಂಡಿತವಾಗಿ ಸರಕಾರದಿಂದ ಸುತ್ತೋಲೆಯನ್ನು ಜಾರಿ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು