ಗಂಗಾವತಿ ಕಾರ್ಯಾಲಯದಲ್ಲಿ ಭಾ ಜ ಪ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ 100 ಕೋಟಿ ಜನಸಂಖ್ಯೆಗೆ ಲಸಿಕೆ ಹಾಕಿಸಿದ ಸಂದರ್ಭದಲ್ಲಿ ಲಸಿಕಾ ಕೇಂದ್ರಗಳಿಗೆ ಕಾರ್ಯಕರ್ತರು ಬೇಟಿ ನೀಡಿ ಸಂಭ್ರಮಿಸಬೇಕೆಂದು ರಮೇಶ ನಾಡಿಗೇರ್ ಹೇಳಿದರು. ಸದರಿ ಕಾರ್ಯಕ್ರಮದಲ್ಲಿ ಶಾಸಕರಾದ ಪರಣ್ಣ ಮುನವಳ್ಳಿಯವರು, ಮಾಜಿ ಕಾಡ ಅಧ್ಯಕ್ಷರಾದ ಎಚ್. ಗಿರೇಗೌಡರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಚನ್ನಪ್ಪ ಮಳಗಿ ವಕೀಲರು, ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ,ಜಿಲ್ಲಾ ಉಪಾಧ್ಯಕರಾದ ರಾಘವೇಂದ್ರ ಶೆಟ್ಟಿ, ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾದ ಚನ್ನವೀರಗೌಡ ಕೋರಿ, ಜಿಲ್ಲಾ ಯುವ ಮೋರ್ಚ ಅಧ್ಯಕ್ಷರಾದ ಯಮನೂರ ಚೌಡ್ಕಿ, ನಗರಸಭೆ ವಿರೋಧ ಪಕ್ಷದ ನಾಯಕರಾದ ನವೀನ್ ಮಾಲಿಪಾಟೀಲ್ ಎರಡೂ ಮಂಡಲದ ವಿವಿಧ ಮೋರ್ಚಗಳ ಪದಾಧಿಕಾರಿಗಳು, ನಗರಸಭೆ ಸದಸ್ಯರು, ವಿವಿಧ ಸಮಿತಿಗಳ ನಾಮನಿರ್ದೇಶಿತ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು