ಕಾರಟಗಿ ತಾಲೂಕು ಹುಲ್ಕಿಹಾಳ್ ಗ್ರಾಮದಲ್ಲಿರುವ ಅಸ್ಪೃಶ್ಯತೆ ಆಚರಣೆಯನ್ನು ನಿವಾರಿಸಿ, ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಯವರಿಗೆ ದೇವಸ್ಥಾನ, ಹೋಟೆಲ್, ಕ್ಷೌರದ ಅಂಗಡಿ, ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಅವಕಾಶವನ್ನು ನೀಡಿ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಅನುಚ್ಛೇದ 17ನ್ನು ಯಥಾವತ್ತಾಗಿ ಜಾರಿ ಮಾಡಿ ಗ್ರಾಮದಲ್ಲಿ ಶಾಂತಿ ಹಾಗೂ ಸಮಾನತೆಯನ್ನು ಕಾಪಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲೂಕು ಸಮಿತಿ, ಕಾರಟಗಿ ತಹಸಿಲ್ದಾರ್ ಗ್ರೇಡ್-2 ವಿಶ್ವನಾಥ ಮುರುಡಿ ಅವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ದಸಂಸ (ಭೀಮವಾದ )ಸಂಚಾಲಕರಾದ ಹುಲಿಗೇಶ ಕಕ್ಕರಗೋಳ, ಸಂಘಟನಾ ಸಂಚಾಲಕರಾದ ಮಾರುತಿ ಹುಲ್ಕಿಹಾಳ್, ವೀರೇಶ್ ಹುಲ್ಕಿಹಾಳ್, ಕಾನೂನು ಸಲಹೆಗಾರರಾದ ವೀರೇಶ್ ವಕೀಲರು ಈಳಿಗನೂರ್, ಹಾಗೂ ಗ್ರಾಮಸ್ಥರು ಸಂಘಟನೆ ಪಾದಾಧಿಕಾರಿಗಳು ಉಪಸ್ಥಿತರಿದ್ದರು