ಮಾನವಿಯಲ್ಲಿ ದಸರಾ ಉತ್ಸವ ಕಾರ್ಯಕ್ರಮ

ಇಂದು ಮಾನವಿಯಲ್ಲಿ ದಸರಾ ಉತ್ಸವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು
ನಲವತ್ತೆಂಟು ವರ್ಷಗಳಿಂದ ಮಾನವಿಯಲಿ ಪ್ರತಿವರ್ಷವೂ ದಸರಾ ಹಬ್ಬದ ಪ್ರಯುಕ್ತ ಈ ಉತ್ಸವ ಏರ್ಪಡಿಸಲಾಗುತ್ತದೆ, ಈ ಉತ್ಸವವು ನಂದಿಕೋಲು ಕುಣಿತ ಮತ್ತು ಕುಂಭ ಕಳಸ ಗಳಿಂದ ಮಾನವಿ ನಗರದ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಬಸವ ವೃತ್ತ ಡಾ. ಬಿಆರ್ ಅಂಬೇಡ್ಕರ್ ವೃತ್ತದಿಂದ, ನಗರದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ನಡೆಸಿ ದಸರಾ ಉತ್ಸವವನ್ನು ಆಚರಿಸಲಾಗುತ್ತದೆ.
ಈ ಉತ್ಸವದಲ್ಲಿ ಪುರಸಭೆ ಸದಸ್ಯರಾದ ಶ್ರೀ ರಾಜಾ ಮಹೇಂದ್ರ ನಾಯಕ, ಜೆಡಿಎಸ್ ಯುವ ಮುಖಂಡರಾದ ಶ್ರೀ ರಾಜಾ ರಾಮಚಂದ್ರನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ವೀರೇಶ ನಾಯಕ ಬೆಟ್ಟದೂರ, ಶ್ರೀ ಮೌನೇಶ ನಾಯಕ, ಪುರಸಭೆ ಸದಸ್ಯರಾದ ಶ್ರೀ ಶರಣಪ್ಪ ಮೇಧಾ, ವಾಲ್ಮೀಕಿ ಮಹಾಸಭಾದ ತಾಲೂಕ ಅಧ್ಯಕ್ಷರಾದ ಶ್ರೀ ಹನುಮೇಶ ನಾಯಕ ಸಾದಾಪುರ ಹಾಗೂ ಮಾನವಿ ನಗರದ ಶರಣಾದಿ ಶರಣರು, ಗಣ್ಯಾತಿಗಣ್ಯರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.
ವರದಿ : ದೇವರಾಜ ನಾಯಕ ಮಾನವಿ

Discover more from Valmiki Mithra

Subscribe now to keep reading and get access to the full archive.

Continue reading