ನವರಾತ್ರಿ ಹಬ್ಬದ ಪ್ರರಂಬದ ದಿನದ ಪ್ರಯುಕ್ತ ಸುರಪುರದಲ್ಲಿ ನೆಡೆದ ನಾಡದೇವಿಯ ಮೆರವಣಿಗೆಗೆ ತಾಲ್ಲೂಕಿನ ವಿವಿಧ ಶಾಲೆ ಮತ್ತು ಸಂಘ ಸಂಸ್ಥೆಗಳೊಂದಿಗೆ ಶಾಸಕರು ಚಾಲನೆ ನೀಡಿದರು. ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಗರುಡಾದ್ರಿ ಕಲಾ ಮಂದಿರದವರೆಗೆ ಮೆರವಣಿಗೆ ನೆಡೆದ ಉತ್ಸವದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜಾ ಹನಮಪ್ಪ ನಾಯಕ. ನಾಡಹಬ್ಬ ಉತ್ಸವ ಸಮಿತಿಯ ಗೌರವಾಧ್ಯಕರಾದ ಶ್ರೀ ರಾಜಾ ಪಾಮನಾಯಕ ಶ್ರೀ ಕಲ್ಬರ‍್ಗಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ಸುರೇಶ ಆರ್ ಸಜ್ಜನ್. ಶ್ರೀ ಕಿಶೋರ್ ಚಂದ್ ಜೈನ ಉದ್ದಿಮೆದಾರರು, ಶ್ರೀ ಮರಿಲಿಂಗಪ್ಪ ನಾಯಕ ರ‍್ನಾಳ ಮತ್ತು ಶ್ರೀ ದೇವರಾಜ ಮಕಾಶಿ ಹೇಮನೂರ ವಕೀಲರು ಇತರರು ಉಪಸ್ಥಿತರಿದ್ದರು
ವರದಿ : ಸಿಂಧೂರ , ಸುರಪುರು ತಾಲ್ಲೂಕ್