ಮಲ್ಲಠ ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಶ್ರೀ ದುರುಗೇಶ ನಾಯಕ ಮಾನವಿ ಇವರಿಗೆ, ರಾಯಚೂರು ಜಿಲ್ಲಾ, ಹಾಗೂ ಮಾನವಿ ತಾಲೂಕ ಶ್ರೀ ವಾಲ್ಮೀಕಿ ನಾಯಕ ನೌಕರರ ಸಂಘದ ವತಿಯಿಂದ ಶ್ರೀ ಯುತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವಾಲ್ಮೀಕಿ ನಾಯಕ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ಈಶಪ್ಪ ನಾಯಕ, ರಾಯಚೂರು ಜಿಲ್ಲಾ ಕಾರ್ಯದರ್ಶಿ ಶ್ರೀ ಭಗಯ್ಯ ನಾಯಕ ದೊರೆ, ಗೋಪಾಲ ನಾಯಕ ಗೊರ್ಕಲ್ , ಗುರುರಾಜ ನಾಯಕ ಮಾನವಿ, ಚಂದ್ರಶೇಖರ ನಾಯಕ ಗೋವಿನದೊಡ್ಡಿ, ಹಾಗೂ ಸಮಾಜದ ಮುಖಂಡರು ಇದ್ದರು.