ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಶ್ರೀ ಕ್ಷೇತ್ರ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನೆಡೆದ “ಜನಜಾಗೃತಿಗಾಗಿ ಜನಸ್ಪಂದನ ಸಭೆ” ಯ “ಸಾಮಾಜಿಕ ನ್ಯಾಯದ ಕಾಯ೯ರೂಪಕ್ಕಾಗಿ ಕಾಯ೯ಗಾರ” ದ ಎರಡು ದಿನಗಳ ಕಾಯ೯ಗಾರ ಯಶಸ್ವಿಯಾಗಿ ನಡೆಯುತ್ತಿದ್ದು
ದಿನಾಂಕ : 04/10/2021 ಸೋಮವಾರ ಬೆಳಿಗ್ಗೆ 10:30 ಕ್ಕೆ ಸಮುದಾಯದ ಗೌರವಾನ್ವಿತ ಜನಪ್ರತಿನಿಧಿಗಳಾದ ಸನ್ಮಾನ್ಯ ಹಾಲಿ ಹಾಗೂ ಮಾಜಿ ಸಚಿವರು ಸಂಸದರು ಶಾಸಕರ ನೇತೃತ್ವದಲ್ಲಿ ಸಮಾಜದ ಪರಮಪೂಜ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮೂರನೇ ದಿನದ ಕಾಯ೯ಗಾರದಲ್ಲಿ ಸಂವಾದ ಕಾಯ೯ಕ್ರಮ ನೆಡೆಯಿತು
ಈ ಸಭೆಯಲ್ಲಿ ಜಗಳೂರಿನ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಆಭಿವೃದ್ದಿ ನಿಗಮ ಮಂಡಳಿ ಅದ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ರವರು ಭಾಗವಹಿಸಿದರು..
ಈ ಸಂದರ್ಭದಲ್ಲಿ ಚಳಕೆರೆ ಶಾಸಕರಾದ ಟಿ,ರಘುಮೂರ್ತಿ , ಬಳ್ಳಾರಿ ಜಿಲ್ಲೆಯ ಸಂಸದರಾದ ವೈ.ದೇವೆಂದ್ರಪ್ಪ , ಶಾಸಕರಾದ ಅನಿಲ್ ಚಿಕ್ಕಮಾದು, ಹರ್ತಿಕೋಟೆ ವೀರೇಂದ್ರಸಿಂಹ ಸರ್ , ಸೇರಿದಂತೆ ಹಲವು ಶಾಸಕರು, ಗಣ್ಯರು ಉಪಸ್ಥಿತರಿದ್ದರು…