ಶ್ರೀ ಗಂಗಾಧರಯ್ಯ ಟಿ ಉಪತಹಶೀಲ್ದಾರರು ನಾಡಕಚೇರಿ ಬಿಳಿಚೋಡು ಇವರ ವಯೋನಿವೃತ್ತಿಯ ಬೀಳ್ಕೊಡುಗೆ ಸಮಾರಂಭವನ್ನು ತಾಲೂಕು ಕಚೇರಿ ಜಗಳೂರಿನಲ್ಲಿ ಮಾನ್ಯ ತಹಶೀಲ್ದಾರರಾದ ಡಾಕ್ಟರ್ ನಾಗವೇಣಿ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಂದಾಯ ಇಲಾಖೆಯಲ್ಲಿ ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀ ಗಂಗಾಧರಯ್ಯ ಇವರಿಗೆ ಕಂದಾಯ ಇಲಾಖೆಯ ವತಿಯಿಂದ ಸನ್ಮಾನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಿರಸ್ತೆದಾರ ರಾದ ರಾಮಚಂದ್ರಪ್ಪ ಹೆಚ್. ಉಪ ತಹಶೀಲ್ದಾರರಾದ ರೂಪ. ರಾಜಸ್ವ ನಿರೀಕ್ಷಕರು ಗಳಾದ ಕುಬೇಂದ್ರ ನಾಯಕ, ಧನಂಜಯ್, ಶ್ರೀನಿವಾಸ್ ಮತ್ತು ಗ್ರಾಮಲೆಕ್ಕಾಧಿಕಾರಿ ಗಳಾದ ದುರ್ಗೇಶ್, ಶಿವರಾಜ್, ವಿನಾಯಕ್, ಮಧುಸೂದನ, ಹೆಚ್ ಅರುಣ್ ಕುಮಾರ್ ಹಾಗೂ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮಸಹಾಯಕರು ಗಳು ಮತ್ತು ತಾಲೂಕು ಕಚೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಶ್ರೀಯುತರ ನಿವೃತ್ತಿ ಜೀವನವು ಸುಖ-ಸಂತೋಷ ಮತ್ತು ಆರೋಗ್ಯದಿಂದ ತುಂಬಿರಲಿ ಎಂದು ವಾಲ್ಮೀಕಿ ಮಿತ್ರ ಪತ್ರಿಕೆ ಯು ಆಶಿಸುತ್ತದೆ……